ಉತ್ತರಾಖಂಡದಲ್ಲಿ ತಣಿಯದ ಕಾಳ್ಗಿಚ್ಚು: ಮುಂದುವರಿದ ಕಾರ್ಯಾಚರಣೆ - Massive fire continues in Uttarakhand forest
🎬 Watch Now: Feature Video

ಡೆಹರಾಡೂನ್: ಉತ್ತರಾಖಂಡದಲ್ಲಿ ಕೆಲ ವಾರಗಳಿಂದ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು ಮತ್ತಷ್ಟು ವ್ಯಾಪಿಸಿದೆ. ನಿರಂತರವಾಗಿ ಹೆಲಿಕಾಪ್ಟರ್ಗಳಿಂದ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದರೂ ತಹ ಬದಿಗೆ ಬಂದಿಲ್ಲ. ಚಾಮುಂಡ್ ಅರಣ್ಯ ವ್ಯಾಪ್ತಿಯಲ್ಲಿ ಈ ಕಾಳ್ಗಿಚ್ಚು ನಿರಂತರವಾಗಿ ಹೊತ್ತಿ ಉರಿಯುತ್ತಿದೆ. ಇಲ್ಲಷ್ಟೇ ಅಲ್ಲ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಾಳ್ಗಿಚ್ಚು ಆವರಿಸಿದ್ದು, ನಾಲ್ವರು ವ್ಯಕ್ತಿಗಳು ಹಾಗೂ 7 ಪ್ರಾಣಿಗಳು ಮೃತಪಟ್ಟಿರುವುದು ಈ ಹಿಂದೆ ವರದಿಯಾಗಿತ್ತು. ನೈನಿತಾಲ್, ಅಲ್ಮೋರಾ, ತೆಹ್ರಿ ಮತ್ತು ಪೌರಿ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ವ್ಯಾಪಿಸಿತ್ತು. 1,290 ಹೆಕ್ಟೇರ್‌ಗಿಂತಲೂ ಹೆಚ್ಚು ಕಾಡು ನಾಶವಾಗಿದೆ. ಕಳೆದ ವರ್ಷ ಕೂಡ ಉತ್ತರಾಖಂಡದಲ್ಲಿ ಕಾಳ್ಗಿಚ್ಚು ಸಂಭವಿಸಿದ್ದು, 172 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ ತಲುಪುವ ಮುನ್ನವೇ ಕಾಡು ಹೊತ್ತಿ ಉರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬೆಂಕಿ ನಂದಿಸಲು ಭಾರತೀಯ ವಾಯುಪಡೆಯ (ಐಎಂಎಫ್) ಹೆಲಿಕಾಪ್ಟರ್ಗಳನ್ನು ಕಳುಹಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಕೂಡಾ ಬರೆದಿತ್ತು.
Last Updated : Apr 17, 2021, 11:55 AM IST