ಕೊರೊನಾ ಕರಿಛಾಯೆ, ಪುರಿ ಜಗನ್ನಾಥ ದೇಗುಲ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ - Puri Jagannath Temple news
🎬 Watch Now: Feature Video

ಪುರಿ(ಒಡಿಶಾ): ಇಲ್ಲಿನ ಐತಿಹಾಸಿಕ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಬೇಕಾದರೆ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ದೇಗುಲದ ಆಡಳಿತ ಮಂಡಳಿ ಆದೇಶಿಸಿದೆ. 12 ನೇ ಶತಮಾನದ ಭವ್ಯ ದೇಗುಲಕ್ಕೆ ದೇಶ-ವಿದೇಶಗಳಿಂದ ಸಾವಿರಾರು ಜನ ಬರುತ್ತಾರೆ. ಇದು ನಾಡಿನ ಪವಿತ್ರ ತೀರ್ಥ ಕ್ಷೇತ್ರವೂ ಹೌದು. ಹೀಗಾಗಿ ಇಲ್ಲಿಗೆ ಬರುವ ಭಕ್ತರಿಗೆ ಮಹಾಮಾರಿ ಕೊರೊನಾ ಸೋಂಕು ಹರಡಬಾರದೆಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇದರೊಂದಿಗೆ ದೇಗುಲದ ಒಳಗೆ ಪ್ರವೇಶ ಪಡೆಯುವ ಭಕ್ತರು ಆಗಾಗ ಕೈತೊಳೆಯುತ್ತಿರಬೇಕು. ಜೊತೆಗೆ ಪ್ರತಿಯೊಬ್ಬರಿಂದ ಕನಿಷ್ಠ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.