ಸಿಎಂ ಮಮತಾ ಕಾಲಿಗೆ ಗಾಯ ಆಗಿಲ್ವಾ? ಪ್ರಶ್ನೆ ಹುಟ್ಟು ಹಾಕಿದ ವಿಡಿಯೋ
🎬 Watch Now: Feature Video
ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸ್ತಿದ್ದ ವೇಳೆ ಮಮತಾ ಬ್ಯಾನರ್ಜಿ ಕಾಲಿಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕಾಗಿ ಅವರು ತಮ್ಮ ಕಾಲಿಗೆ ಬ್ಯಾಂಡೆಡ್ ಸುತ್ತಿಕೊಂಡು ಅನೇಕ ಪ್ರಚಾರ ಸಭೆ, ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಪ್ರಮುಖವಾಗಿ ವ್ಹೀಲ್ ಚೇರ್ ಮೇಲೆ ಕುಳಿತು ಭಾಷಣ ಸಹ ಮಾಡಿದ್ರು. ಇದೀಗ ವೈರಲ್ ಆಗಿರುವ ವಿಡಿಯೋವೊಂದು ಅವರ ಕಾಲಿಗೆ ಗಾಯ ಆಗಿಲ್ವಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ವ್ಹೀಲ್ ಚೇರ್ ಮೇಲೆ ಕುಳಿತುಕೊಂಡಿರುವ ಮಮತಾ ನೋವು ಆಗಿರುವ ಕಾಲನ್ನು ಸರಾಗವಾಗಿ ಅಲುಗಾಡಿಸುತ್ತಿರುವುದು ಹಾಗೂ ಒಂದರ ಮೇಲೆ ಮತ್ತೊಂದು ಕಾಲು ಹಾಕಿ ಕುಳಿತುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಬಿಜೆಪಿ ಪ್ರಶ್ನೆ ಮಾಡಿದೆ.
Last Updated : Apr 2, 2021, 9:26 PM IST