Video: ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಶ್ರಾಂತಿ ಪಡೆದ ಹುಲಿರಾಯ - ರಾಷ್ಟ್ರೀಯ ಹೆದ್ದಾರಿ
🎬 Watch Now: Feature Video
ಇಂದೋರ್(ಮಧ್ಯಪ್ರದೇಶ): ಹುಲಿಯೊಂದು ರಾತ್ರಿ ಸಮಯದಲ್ಲಿ ರಾಜಾರೋಷವಾಗಿ ನಡುರಸ್ತೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಈ ದೃಶ್ಯ ಕಂಡು ಬಂದಿದೆ. ಈ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಯಾವುದೇ ವಾಹನಗಳ ಸಂಚಾರವಿರಲಿಲ್ಲ. ಹೀಗಾಗಿ ಯಾವ ಭಯವೂ ಇಲ್ಲದೇ ವ್ಯಾಘ್ರ ವಿಶ್ರಾಂತಿ ಪಡೆಯುತ್ತಿತ್ತು.