ಹೆಂಡ್ತಿ, ಮಕ್ಕಳನ್ನು ಬಿಟ್ಟು ಪ್ರೀತಿ ಹಿಂದೆ ಬಿದ್ದ, ಲವರ್ನೊಂದಿಗೆ ಆತ್ಮಹತ್ಯೆಗೆ ಶರಣಾದ! - lovers suicide in Mancherial national highway,
🎬 Watch Now: Feature Video
ಹೆಂಡ್ತಿ, ಇಬ್ಬರು ಮಕ್ಕಳನ್ನು ಬಿಟ್ಟು ಪ್ರೀತಿ ಹಿಂದೆ ವ್ಯಕ್ತಿ ತನ್ನ ಲವರ್ ಜೊತೆಗೂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಂಚಿರ್ಯಾಲ ಜಿಲ್ಲೆಯ ರಸೂಲ್ಪಲ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಪ್ರೇಮಿಗಳಿಬ್ಬರೂ ವಿಷ ಸೇವಿಸಿದ್ದರು. ಇವರನ್ನು ಗಮನಿಸಿದ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದ್ರೆ ಮಾರ್ಗ ಮಧ್ಯದಲ್ಲೇ ಇವರಿಬ್ಬರು ಸಾವನ್ನಪ್ಪಿದ್ದಾರೆ. ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿ ನಿವಾಸಿ ಡ್ರೈವರ್ ವೆಂಕಟೇಶ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಜೈಪೂರ್ ತಾಲೂಕಿನ ಮಂದಮರ್ರಿ ನಿವಾಸಿ ಶ್ರೀವಿದ್ಯಾ ಪಿಯು ದ್ವಿತೀಯ ವ್ಯಾಸಂಗ ಮಾಡುತ್ತಿದ್ದಳು. ಇವರ ಸಾವಿಗೆ ಪ್ರೇಮ ವೈಫಲ್ಯವೇ ಕಾರಣವೆಂದು ಪೊಲೀಸರು ಹೇಳಿದ್ದಾರೆ.