ಬೆಲ್ಲ ಹಾಕಿದ ನಿಂಬೆ ಪಾನಕ ಕುಡಿದಿದ್ದೀರಾ? ಸರಳವಾಗಿ ತಯಾರಿಸಿ, ಆಯಾಸ ದೂರವಾಗಿಸಿ... - ಸರಳ ಅಡುಗೆ
🎬 Watch Now: Feature Video

ಬೆಲ್ಲ-ನಿಂಬೆ ಪಾನಕವು ತುಂಬಾ ಸರಳವಾಗಿ ತಯಾರಿಸಬಹುದಾದ ಪಾನೀಯವಾಗಿದೆ. ಬೆಲ್ಲವು ನಿಮಗೆ ಗ್ಲೂಕೋಸ್ ರೂಪದಲ್ಲಿ ಶಕ್ತಿ ನೀಡುತ್ತದೆ. ನಿಮ್ಮನ್ನು ಮತ್ತಷ್ಟು ರೀಫ್ರೆಶ್ ಮಾಡುತ್ತದೆ. ಇದು ನಿಮ್ಮ ರಕ್ತದಲ್ಲಿನ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತದೆ. ನಿಂಬೆಯು ನಿಮ್ಮ ಮನಸ್ಥಿತಿಯನ್ನು ಶಾಂತವಾಗಿಸಿ ಶಕ್ತಿ ತುಂಬುತ್ತದೆ. ಅಲ್ಲದೆ ಇದು ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಈ ಪಾನೀಯವು ಬೇಸಿಗೆ ಕಾಲಕ್ಕೆ ಅಥವಾ ನೀವು ಹೆಚ್ಚು ಸುಸ್ತಾದ ಸಂದರ್ಭದಲ್ಲಿ ಬೇಗನೆ ತಯಾರಿಸಿ ಕುಡಿಯಬಹುದಾದ ಪಾನೀಯವಾಗಿದೆ. ಇದನ್ನು ಹೇಗೆ ಮಾಡೋದು ಅಂತಾ ನೀವೇ ನೋಡಿ...