ಅಧಿಕಾರಿಗಳ ಗಮನ ಸೆಳೆಯಲು ಹಿಮ ರಾಶಿಯಲ್ಲಿ ಕ್ರಿಕೆಟ್ ಆಡಿದ ಕಾಶ್ಮೀರ ಕಣಿವೆ ಯುವಕರು - ಹಿಮದ ರಾಶಿಯಲ್ಲಿ ಕ್ರಿಕೆಟ್ ಆಡಿದ ಯುವಕರು
🎬 Watch Now: Feature Video

ಬಂಡಿಪೋರ: ಚಳಿಗಾಲದ ಕ್ರೀಡೆಗಳನ್ನು ಉತ್ತೇಜಿಸಲು ಉನ್ನತ ಅಧಿಕಾರಿಗಳು ಮತ್ತು ಹೊರಗಿನ ಜನರ ಗಮನ ಸೆಳೆಯುವ ಸಲುವಾಗಿ ಉತ್ತರ ಕಾಶ್ಮೀರದ ಬಂಡಿಪೋರ ಜಿಲ್ಲೆಯ ಗುರೆಜ್ ಸೆಕ್ಟರ್‌ನ ದವಾರ್ ಗ್ರಾಮದಲ್ಲಿ ಯುವಕರು ಹಿಮದ ರಾಶಿ ಮೇಲೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದರು. ಸ್ಥಳೀಯರ ಪ್ರಕಾರ, ಈ ಪ್ರದೇಶ ಹಿಮರಾಶಿಯಿಂದ ಆವೃತ್ತವಾಗಿ, ಚಳಿಗಾಳದ ಕ್ರೀಡೆಗಳಿಗೆ ಸೂಕ್ತವಾಗಿದೆ. ಆದರೆ, ಇಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ, ಯುವಕರು ಹಿಮದ ರಾಶಿ ಮೇಲೆ ಕ್ರಿಕೆಟ್ ಪಂದ್ಯಾಟ ಆಯೋಜಿಸಿ, ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.