ಕಾರ್ತಿಕ ಪೂರ್ಣಿಮಾ ಪ್ರಯುಕ್ತ ಅಯೋಧ್ಯೆಯಲ್ಲಿ ದೀಪಗಳ ಚಿತ್ತಾರ - ಕಾರ್ತಿಕ ಪೂರ್ಣಿಮಾ
🎬 Watch Now: Feature Video

ಅಯೋಧ್ಯೆ(ಯುಪಿ): ಕಾರ್ತಿಕ ಪೂರ್ಣಿಮಾ ಪ್ರಯುಕ್ತ ಅಯೋಧ್ಯೆಯ ಸರಯು ನದಿ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 51,000 ಮಣ್ಣಿನ ಹಣತೆಗಳನ್ನು ಬೆಳಗಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುನೀತರಾದರು. ಈ ವೇಳೆ, ಭಕ್ತರೊಬ್ಬರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಂತೋಷವಾಗಿದೆ. ನಾನು ಉಪವಾಸ ಮಾಡಿ ಭಗವಾನ್ ರಾಮನನ್ನು ಪ್ರಾರ್ಥಿಸುತ್ತಿದ್ದೇನೆ ಎಂದರು.