ದೇಶ ಸೇವೆಗೆ ತೊಡೆ ತಟ್ಟಿ ನಿಂತಳು ಹುತಾತ್ಮ ಯೋಧನ ಪತ್ನಿ, ಈಕೆ 'ವೀರನಾರಿ' - Indian Army
🎬 Watch Now: Feature Video

ಕೈಯಲ್ಲಿ 4 ವರ್ಷದ ಮಗು, ಹೃದಯದಲ್ಲಿ ಯೋಧನಾಗಿದ್ದ ಪತಿ ಕಳೆದುಕೊಂಡು ಉಮ್ಮಳಿಸಿ ಬರುತ್ತಿರುವ ಮಡುಗಟ್ಟಿದ ದುಃಖ. ಹೃದಯಾಂತರಾಳದಲ್ಲಿ ಹೇಳಲಾರದಷ್ಟು ನೋವು, ಸಮಾಜವನ್ನು ಸಮರ್ಥವಾಗಿ ಎದುರಿಸಬೇಕಾದ ಸಾಲು ಸಾಲು ಸವಾಲುಗಳ ಸರಮಾಲೆ. ಜೊತೆಗೆ ದೇಶ ಸೇವೆ ಮಾಡಲೇಬೇಕೆಂಬ ಅದಮ್ಯ ತುಡಿತ. ಇದು ಹುತಾತ್ಮ ವೀರ ಯೋಧ ಕೌಸ್ತುಭ್ ರಾಣೆಯ ಪತ್ನಿ ಕನಿಕಾ ರಾಣೆಯ ವ್ಯಥೆ.