ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನ ಇಂದಿನಿಂದ ಆರಂಭ.. ಕೈ ಬೀಸಿ ಕರೆಯುತ್ತಿವೆ ಹೂಗಳ ರಾಶಿ
🎬 Watch Now: Feature Video
ಜಮ್ಮು -ಕಾಶ್ಮೀರ: ಶ್ರೀನಗರದ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನ ಎಂದೇ ಪ್ರಸಿದ್ಧಿಯಾಗಿರುವ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಇಂದಿನಿಂದ ತೆರೆಯಲಾಗುತ್ತಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಉದ್ಯಾನ ಆರಂಭವಾಗುತ್ತಿರುವ ಕುರಿತಂತೆ ಮಾಹಿತಿ ನೀಡಿದ್ದರು. ದಾಲ್ ಸರೋವರದ ತೀರದಲ್ಲಿ 80 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಉದ್ಯಾನದಲ್ಲಿ 64 ಕ್ಕೂ ಹೆಚ್ಚು ಪ್ರಭೇದಗಳ 1.5 ದಶಲಕ್ಷ ಹೂವುಗಳಿವೆ. ಪ್ರತಿವರ್ಷ ಗಾರ್ಡನ್ ಅನ್ನು ಏ. 01 ರಿಂದ ಮೇ.30 ರವರೆಗೆ ತೆರೆಯುತ್ತಿತ್ತು. ಆದರೆ ಈ ವರ್ಷ ಒಂದು ವಾರ ಮುಂಚಿತವಾಗಿ ಗಾರ್ಡನ್ಗೆ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿ ಕೊಡಲಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.