ನಿಸರ್ಗ ಸೈಕ್ಲೋನ್: ಪ್ರತಿಕೂಲ ಹವಾಮಾನದ ಬಗ್ಗೆ ಮೀನುಗಾರರಿಗೆ ಎಚ್ಚರಿಕೆ - ಭಾರತೀಯ ಕರಾವಳಿ ಭದ್ರತಾ ಪಡೆ
🎬 Watch Now: Feature Video
ಮುಂದಿನ 12 ಗಂಟೆಗಳಲ್ಲಿ ನಿಸರ್ಗ ಚಂಡಮಾರುತವು ಉಗ್ರ ಸ್ವರೂಪ ತಾಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕೂಲ ಹವಾಮಾನದ ಬಗ್ಗೆ ಮೀನುಗಾರರಿಗೆ ಭಾರತೀಯ ಕರಾವಳಿ ಭದ್ರತಾ ಪಡೆ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ. ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿದಿರುವ ಮೀನುಗಾರರಿಗೆ ಈ ಎಚ್ಚರಿಕೆಯ ಸಂದೇಶಗಳನ್ನು ಕರಾವಳಿ ಭದ್ರತಾ ಪಡೆ ಸಿಬ್ಬಂದಿ ರವಾನಿಸುತ್ತಿದ್ದಾರೆ.