ನಮಗೆ ವಯಸ್ಸಾಯ್ತು.. ಯುವಕರಿಗೆ ಮೊದಲು ಕೋವಿಡ್ ಲಸಿಕೆ ನೀಡಿ: ಮಲ್ಲಿಕಾರ್ಜುನ ಖರ್ಗೆ! - Mallikarjun Kharge latest news
🎬 Watch Now: Feature Video
ನವದೆಹಲಿ: ದೇಶಾದ್ಯಂತ ಇಂದಿನಿಂದ ಮೂರನೇ ಹಂತದ ಕೋವಿಡ್ ಲಸಿಕೆ ನೀಡಲು ಶುರು ಮಾಡಲಾಗಿದ್ದು, ಇದರಲ್ಲಿ 60 ವರ್ಷ ಮೇಲ್ಪಟ್ಟ ನಾಗರಿಕರು ಹಾಗೂ 45 ರಿಂದ 49 ವರ್ಷದವರೆಗಿನ ಕಾಯಿಲೆ ಪೀಡಿತರಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತಿದೆ. ಇದೇ ವಿಚಾರವಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ನನಗೆ 70 ವರ್ಷ ವಯಸ್ಸಾಗಿದೆ. ನನಗಿಂತಲೂ ನೀವು ಯುವಕರಿಗೆ ಕೋವಿಡ್ ಲಸಿಕೆ ನೀಡಬೇಕು. ನಾನು ಬಹಳ ಅಂದರೆ 10-15 ವರ್ಷ ಬದುಕಬಲ್ಲೆನು. ಆದರೆ ಯುವಕರು ದೀರ್ಘಾಯುಷ್ಯ ನಡೆಸಬೇಕಾಗಿರುವ ಕಾರಣ ಮೊದಲ ಆದ್ಯತೆ ಅವರಿಗೆ ನೀಡಬೇಕು ಎಂದು ಖರ್ಗೆ ಹೇಳಿದ್ದಾರೆ.