'ಬುರೆವಿ ಭೀತಿ: ಕೇರಳ,ತಮಿಳುನಾಡು ಕರಾವಳಿಯಲ್ಲಿ ಹೈ ಅಲರ್ಟ್ - ಬುರೆವಿ ಚಂಡಮಾರುತ
🎬 Watch Now: Feature Video
ಕೊಚ್ಚಿ : 'ಬುರೆವಿ ಚಂಡಮಾರುತ' ತಮಿಳುನಾಡು ಮತ್ತು ಕೇರಳದ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಹಿನ್ನೆಲೆ, ಕರಾವಳಿ ತೀರದಲ್ಲಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎರಡೂ ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಕರಾವಳಿ ರಕ್ಷಣಾ ಪಡೆ ಹಡಗು ಮತ್ತು ವಿಮಾನಗಳನ್ನು ಸಜ್ಜಾಗಿಟ್ಟಿದೆ. ಅಲ್ಲದೇ, ಮೀನುಗಾರರು ತಕ್ಷಣವೇ ಸಮೀಪದ ಬಂದರುಗಳಿಗೆ ಹಿಂದಿರುಗುವಂತೆ ಸೂಚನೆ ನೀಡಲಾಗಿದೆ.