ಹೆಚ್ಪಿಸಿಎಲ್ ರಿಫೈನರಿ ಎಸ್ಹೆಚ್ಯು ಘಟಕದಲ್ಲಿ ದಟ್ಟ ಹೊಗೆ... ಬೆಚ್ಚಿಬಿದ್ದ ವಿಶಾಖಪಟ್ಟಣ ಜನ - ವಿಶಾಖಪಟ್ಟಣ ಅನಿಲ ದುರಂತ ನ್ಯೂಸ್
🎬 Watch Now: Feature Video
ವಿಶಾಖಪಟ್ಟಣ (ಆಂಧ್ರಪ್ರದೇಶ): ಇತ್ತೀಚೆಗಷ್ಟೇ ಎಲ್ಜಿ ಕಂಪನಿಯಿಂದ ಸೋರಿಕೆಯಾಗಿ ಅನಿಲ ದುರಂತದಿಂದ ಆಘಾತಕ್ಕೊಳಗಾಗಿದ್ದ ವಿಶಾಖಪಟ್ಟಣದಲ್ಲಿ ಇಂದು ಮತ್ತೊಂದು ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ವಿಶಾಖಪಟ್ಟಣದ ಹೆಚ್ಪಿಸಿಎಲ್ ರಿಫೈನರಿ ಎಸ್ಹೆಚ್ಯು ಘಟಕವನ್ನು ಇಂದು ತೆರೆದಾಗ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಲಾಕ್ಡೌನ್ ಅವಧಿಯಲ್ಲಿ ಬಂದ್ ಆಗಿದ್ದ ಈ ಘಟಕವನ್ನು ಪುನಃ ತೆರೆದಾಗ ಈ ರೀತಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಂಡು ಕಂಗಾಲಾದ ಸ್ಥಳೀಯರು ತಮಗೆ ಮತ್ತೇನೂ ಕಾದಿದೆಯೋ ಎಂದು ಭಯಭೀತರಾಗಿದ್ದರು. ಬಳಿಕ ಹೊಗೆ ಕಡಿಮೆಯಾದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.