ಕಾರಿನ ಮೇಲೆ ಕಾರು: ಹೈದರಾಬಾದ್​ ಮಳೆ ಆರ್ಭಟಕ್ಕೆ ಕೊಚ್ಚಿ ಹೋದ ಕಾರುಗಳು! - ಹೈದರಾಬಾದ್​ನಲ್ಲಿ ವ್ಯಾಪಕ ಮಳೆ

🎬 Watch Now: Feature Video

thumbnail

By

Published : Oct 14, 2020, 1:29 PM IST

ತೆಲಂಗಾಣ ಕಳೆದ 100 ವರ್ಷಗಳಿಂದ ಕಂಡು ಕೇಳರಿಯದ ರೀತಿಯ ಮಳೆ ಪ್ರವಾಹಕ್ಕೊಳಗಾಗಿದೆ. ಹೀಗಾಗಿ ಜನ - ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದ್ದು, ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ವಿವಿಧ ಪ್ರದೇಶಗಳಲ್ಲಿ ಪಾರ್ಕ್​ ಮಾಡಿದ್ದ ಕಾರು - ಬೈಕ್​​ಗಳು ಮಳೆ ಪ್ರವಾಹಕ್ಕೆ ತೇಲಿ ಹೋಗಿವೆ. ಸಿಕಂದರಾಬಾದ್​ನ ಗೋವಿಂದ್​​ಪಲ್ಲಿಯಲ್ಲಿ ಮಳೆ ನೀರಿನಿಂದ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಪಾರ್ಕ್​ ಮಾಡಿದ್ದ ಕಾರುಗಳು ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಿ ಮಳೆಯ ರೌದ್ರಾವತಾರವನ್ನ ತೋರಿಸುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.