ದೇವರನಾಡಲ್ಲಿ ವರುಣನಾರ್ಭಟ, ಡ್ಯಾಂಗಳ ಕ್ರಸ್ಟ್ ಗೇಟ್ ಓಪನ್: ನದಿಪಾತ್ರಗಳಲ್ಲಿ ಹೈ ಅಲರ್ಟ್ - ಇಡುಕ್ಕಿ ಡ್ಯಾಂ ಗೇಟ್ಗಳು ಓಪನ್
🎬 Watch Now: Feature Video
ಕೇರಳದಲ್ಲಿ ಮಳೆ ಅಬ್ಬರಿಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಇಡುಕ್ಕಿ ಅಣೆಕಟ್ಟುಗಳ ಕ್ರಸ್ಟ್ ಗೇಟ್ಗಳನ್ನು ತೆರೆಯಲಾಯಿತು. ನೀರಿನ ಮಟ್ಟವನ್ನು ನಿಯಂತ್ರಿಸುವ ಸಲುವಾಗಿ ಇಡುಕ್ಕಿ ಅಣೆಕಟ್ಟಿನ ಭಾಗವಾಗಿರುವ ಚೆರುತೋಣಿ ಅಣೆಕಟ್ಟಿನ ಗೇಟನ್ನು ಸಹ ತೆರೆಯಲಾಗಿದೆ. ಡ್ಯಾಂನಿಂದ ಬಿಟ್ಟಿರುವ ನೀರು ಪ್ರವಾಹ ಪೀಡಿತ ಪ್ರದೇಶಗಳಾದ ಅಲುವಾ ಮತ್ತು ಕಾಲಡಿಯನ್ನು ತಲುಪುವ ನಿರೀಕ್ಷೆಯಿರುವುದರಿಂದ ಪೆರಿಯಾರ್ ನದಿಪಾತ್ರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಡಮಲಯಾರ್ ಮತ್ತು ಪಂಬಾ ಅಣೆಕಟ್ಟುಗಳನ್ನು ಕೂಡ ತೆರೆಯಲಾಗಿದೆ. ಡ್ಯಾಂಗಳಿಂದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.