ಮುತ್ತಿನ ನಗರಿಯಲ್ಲಿ ಮತ್ತೆ ಜಲಾಸುರನ ಅಟ್ಟಹಾಸ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು! - ತೆಲಂಗಾಣ ಮಳೆಯ ಸುದ್ದಿ
🎬 Watch Now: Feature Video
ಹೈದರಾಬಾದ್: ಕಳೆದ ಮೂರು ದಿನಗಳ ಹಿಂದೆ ಮಳೆಯಾರ್ಭಟಕ್ಕೆ ತತ್ತರಿಸಿದ್ದ ತೆಲಂಗಾಣದಲ್ಲಿ ನಿನ್ನೆ ರಾತ್ರಿ ಮತ್ತೆ ಜಲಾಸುರ ಅಟ್ಟಹಾಸ ಮೆರೆದಿದ್ದಾನೆ. ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾಚಕೊಂಡದ ಅಬ್ದುಲ್ಪುರ್ಪೇಟ್ನ ಪೊಲೀಸ್ ಕಾರು ಮಳೆಯ ನೀರಿನಲ್ಲಿ ಸಿಲುಕೊಂಡಿದ್ದು, ಜೆಸಿಬಿ ಸಹಾಯದಿಂದ ಹೊರತೆಗೆಯಲಾಗಿದೆ. ಇದೀಗ ಜಲ ಪ್ರಳಯಕ್ಕೆ ತೆಲಂಗಾಣ ತತ್ತರಿಸಿ ಹೋಗಿದ್ದು, ಮತ್ತಷ್ಟು ರೋಗ ಭೀತಿ ಉಂಟಾಗಿದೆ. ಮೊನ್ನೆ ಸುರಿದ ಮಳೆಯಲ್ಲಿ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.
Last Updated : Oct 18, 2020, 7:34 AM IST