ಕೇರಳದ ಆನೆ ‘ಗುರುವಾಯೂರು ಪದ್ಮನಾಭನ್’ ಸಾವು - ಗುರುವಾಯೂರು ದೇವಸ್ಥಾನದ ಆನೆ ಪದ್ಮನಾಭನ್ ಸಾವು
🎬 Watch Now: Feature Video
ತ್ರಿಶೂರ್ (ಕೇರಳ): ಗುರುವಾಯೂರು ದೇವಸ್ಥಾನದ ಆನೆ ‘ಗುರುವಾಯೂರು ಪದ್ಮನಾಭನ್’ (84) ಬುಧವಾರ ಮಧ್ಯಾಹ್ನ ನಿಧನ ಹೊಂದಿದೆ ಎಂದು ದೇವಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲ ವಾರಗಳಿಂದ ಅನಾರೋಗ್ಯಕ್ಕೀಡಾಗಿದ್ದ ಆನೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ‘ಪದ್ಮನಾಭನ್’ ತ್ರಿಶೂರ್ ಪೂರ್ಣಂ ಸೇರಿದಂತೆ ಅನೇಕ ದೇಗುಲಗಳ ಉತ್ಸವದಲ್ಲಿ ಪಾಲ್ಗೊಂಡಿತ್ತು. 2004ರಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ನೆನ್ಮರ ವೆಲ್ಲಂಗಿ ವೇಳಾ ಹಬ್ಬದಲ್ಲಿ ಪಾಲ್ಗೊಂಡು ₹2.22 ಲಕ್ಷ ಸಂಭಾವನೆ ಪಡೆದುಕೊಂಡಿತ್ತು. ‘ಪದ್ಮನಾಭನ್’ ನಿಧನದಿಂದ ದೇವಸ್ಥಾನದಲ್ಲಿರುವ ಆನೆಗಳ ಸಂಖ್ಯೆ 47ಕ್ಕೆ ಇಳಿದಿದೆ.
Last Updated : Feb 27, 2020, 6:34 AM IST