ಮಕ್ಕಳ ಮೇಲೆ ಪೋಷಕರ ಪ್ರೀತಿಯಲ್ಲಿ ಏರುಪೇರು: ತಂದೆ-ತಾಯಿ ರಕ್ತವನ್ನೇ ಹೀರಿದ ಹಿರಿಯ ಮಗ! - ಗುರುಗ್ರಾಮ್ ಅಪರಾಧ ಸುದ್ದಿ
🎬 Watch Now: Feature Video
ಕಿರಿಯ ಮಗನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದ ಹೆತ್ತ ತಂದೆ-ತಾಯಿಗೆ ಹಿರಿಯ ಮಗ ಚಾಕುವಿನಿಂದ ದಾಳಿ ನಡೆಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತಮ್ಮನ ಮೇಲೆ ಪ್ರೀತಿ ತೋರುತ್ತಿದ್ದ ತಂದೆ-ತಾಯಿಯನ್ನು ಹಿರಿಯ ಮಗ ರಿಷಭ್ ಮೆಹ್ತಾ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಸ್ಥಳದಲ್ಲೇ ತಂದೆ ಮೃತ ಪಟ್ಟಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ತಂದೆ-ತಾಯಿ ಕಾಪಾಡುವ ವೇಳೆ ಕಿರಿಯ ಮಗ ಮಯಾಂಕ್ ಮೆಹ್ತಾನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿದಿದ್ದಾರೆ. ಈ ಘಟನೆ ಕುರಿತು ಗುರುಗ್ರಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.