ಪೊಂಗಲ್ ಕಮಾಲ್: ಹೊಸ್ತೊಡಕಿಗೆ ತಮಿಳುನಾಡಿನಲ್ಲಿ ಇಷ್ಟು ಕೋಟಿ ರೂ. ಮೇಕೆ ವ್ಯಾಪಾರ! - ತಮಿಳುನಾಡಿನಲ್ಲಿ ಒಂದೇ ದಿನ 5 ಕೋಟಿ ರೂ. ಮೇಕೆಗಳ ವ್ಯಾಪಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5668015-thumbnail-3x2-megha.jpg)
ಕೃಷ್ಣಗಿರಿ: ಪೊಂಗಲ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮೇಕೆಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ತಮಿಳುನಾಡಿನಲ್ಲಿ ಪೊಂಗಲ್ ಅನ್ನು ಮೂರು ದಿನ ಆಚರಿಸಲಾಗುತ್ತಿದೆ. ಮೊದಲ ಒಂದು ದಿನ (14) ಸಸ್ಯಾಹಾರವಾದರೆ, ಮಿಕ್ಕ ಎರಡು ದಿನಗಳಲ್ಲಿ ಮಾಂಸಾಹಾರವೇ ಶ್ರೇಷ್ಠವಂತೆ. ಒಂದು ಅಂದಾಜಿನ ಪ್ರಕಾರ ಶುಕ್ರವಾರ ಒಂದೇ ದಿನ 5 ಕೋಟಿ ರೂ. ಮೇಕೆಗಳ ವ್ಯಾಪಾರ ನಡೆದಿದೆ ಎನ್ನಲಾಗುತ್ತಿದೆ. ಕೃಷ್ಣಗಿರಿ ಜಿಲ್ಲೆಯ ಕುಂತರಪಲ್ಲಿ ಮೇಕೆಗಳ ಮಾರುಕಟ್ಟೆಯಲ್ಲಿ ಒಂದೇ ವಾರಕ್ಕೆ ವ್ಯಾಪಾರ ದುಪ್ಪಟ್ಟಾಗಿದ್ದು, ಕುರಿಗಳು ಕನಿಷ್ಠ 4 ಸಾವಿರದಿಂದ, ಗರಿಷ್ಠ 14 ಸಾವಿರ ರೂ.ವರೆಗೆ ಮಾರಾಟವಾಗಿವೆ.