ಹಿಮಾವೃತವಾದ ಪರ್ವತ ಶಿಖರಗಳು: ಪೃಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ - Fresh snowfall in HP, Jammu
🎬 Watch Now: Feature Video
ಹಿಮಾಚಲ ಪ್ರದೇಶ/ಜಮ್ಮು: ಉತ್ತರ ಭಾರತದಲ್ಲಿ ಹಿಮಪಾತ ಮುಂದುವರೆದಿದ್ದು, ಹಿಮಾಚಲ ಪ್ರದೇಶದ ಶಿಮ್ಲಾ, ಕುಫ್ರಿ ಗಿರಿಧಾಮಗಳಲ್ಲಿ ಪೃಕೃತಿ ಸೌಂದರ್ಯ ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವುದರಿಂದ ಇಲ್ಲಿನ ಜನಜೀವನ ಕೂಡ ಅಸ್ತವ್ಯಸ್ಥವಾಗಿದ್ದು, ರಾಜ್ಯದ ಶಿಮ್ಲಾ, ಕುಫ್ರಿ, ಖಡಾಪತ್ತರ್, ನರ್ಕಂದ ಹಾಗೂ ಖಿರ್ಕಿ ಪ್ರದೇಶಗಳಲ್ಲಿ ರಸ್ತೆಗಳು ಬಂದ್ ಆಗಿವೆ. ತುರ್ತು ಪರಿಸ್ಥಿತಿ ಉಂಟಾದಲ್ಲಿ ಜನರು '112' ಹಾಗೂ '1077' ಸಹಾಯ ಸಂಖ್ಯೆಗೆ ಕರೆ ಮಾಡುವಂತೆ ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇನ್ನು ಇತ್ತ ಜಮ್ಮುವಿನಲ್ಲೂ ಭಾರಿ ಹಿಮಪಾತವಾಗಿದ್ದು, ಪೂಂಚ್ನಲ್ಲಿ ಹಿಮಾವೃತವಾದ ಪರ್ವತಗಳು ಆಕರ್ಷಣೀಯವಾಗಿ ಕಾಣುತ್ತಿವೆ.