ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರ ಸಾವು: ತಾಯಿಯೊಂದಿಗೆ ಪ್ರಾಣ ಬಿಟ್ಟ ಮಗು! - ರಸ್ತೆ ಅಪಘಾತದಲ್ಲಿ ನಾಲ್ವರು ಸಾವು
🎬 Watch Now: Feature Video
ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ತಡ ತಾಲೂಕಿನ ಪನ್ನಂಗಾಡು ಬಳಿ ನಿಂತ ಹಾಲಿನ ಟ್ಯಾಂಕರ್ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜಾಗಿದ್ದು, ಎರಡು ಪುಟ್ಟ ಕಂದಮ್ಮಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಯಶ್ವಂತ್ ಎಂಬುವರು ತನ್ನ ತಂದೆ-ತಾಯಿಯನ್ನು ಅಮೆರಿಕಕ್ಕೆ ಕಳುಹಿಸಿಲು ಚೆನ್ನೈ ಏರ್ಪೋರ್ಟ್ಗೆ ಕುಟುಂಬ ಸಮೇತ ತೆರಳಿದ್ದರು. ತಂದೆ-ತಾಯಿ ಬಿಟ್ಟು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ವಿಜಯಲಕ್ಷ್ಮೀ (37), ಅನುಸೆಲ್ವಿ (27), ಒಂದು ವರ್ಷದ ಮಗು ಜೊತೆ ಮತ್ತೊಂದು ಮಗು ಎಂದು ಗುರುತಿಸಲಾಗಿದೆ. ಇನ್ನು ಯಶ್ವಂತ್ ಜೊತೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮಂದಿನ ಕ್ರಮ ಕೈಗೊಂಡಿದ್ದಾರೆ.