ಕೇಂದ್ರ ಬಜೆಟ್ ಬಗ್ಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅಸಮಾಧಾನ: ವಿಡಿಯೋ
🎬 Watch Now: Feature Video
ಈ ಬಾರಿಯ ಕೇಂದ್ರ ಬಜೆಟ್ ಕುರಿತು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮಾತನಾಡಿದ್ದು, ಕಳೆದ 50 ವರ್ಷಗಳಲ್ಲಿ ಕಂಡರಿಯದಂತಹ ನಿರುದ್ಯೋಗ ಸಮಸ್ಯೆ ಈಗ ಉದ್ಭವಿಸಿದೆ. ಬ್ಯಾಂಕಿಂಗ್ ವಲಯ ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿದೆ. ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವ ಮನರೇಗಾ ಯೋಜನೆಯಡಿ ನೀಡಲಾಗುವ ವೇತನವನ್ನು ಕೇಂದ್ರ ಬಜೆಟ್ನಲ್ಲಿ ಶೇ. 34.5 ನಷ್ಟು ಕಡಿತಗೊಳಿಸಿದೆ. ನೋಟು ಅಮಾನ್ಯೀಕರಣವಾದ ಬಳಿಕ ನಿರಂತರವಾಗಿ ಭಾರತದ ಆರ್ಥಿಕತೆ ಕುಂಟುತ್ತಲೇ ಸಾಗಿದೆ. ಶೀಘ್ರ ಚೇತರಿಕೆ ಕಾಣಲು ಸಾಧ್ಯವಿಲ್ಲದಷ್ಟು ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಕೋವಿಡ್ -19 ಹೊಡೆತದಿಂದಾಗಿ ಅತೀ ಹೆಚ್ಚು ಹಾನಿಗೊಳಗಾಗಿರುವ ಮೂಲ ಸೌಕರ್ಯ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳಿಗೆ ಈ ಬಜೆಟ್ನಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆಯಾಗಿಲ್ಲ. ಈ ಬಜೆಟ್ ಕೃಷಿ ಸುಧಾರಣೆಗೆಂದೇ ರೂಪಿತವಾದ ಕೆಲವು ಕಾನೂನುಗಳಿಗೆ ಹೊಡೆತ ನೀಡಲಿದೆ. ಪಿಎಂ ಕಿಸಾನ್ ಯೋಜನೆಯಡಿ ಅಲ್ಪಾವಧಿ ಬೆಳೆಗಳಿಗೆ ನೀಡುವ ಸಬ್ಸಿಡಿ ಪ್ರಮಾಣವನ್ನು ಈ ಬಾರಿಯ ಬಜೆಟ್ನಲ್ಲಿ ಕಡಿತಗೊಳಿಸಲಾಗಿದೆ. ಕಳೆದ 2 ವರ್ಷಗಳಿಂದಲೂ ಪ್ರಧಾನಮಂತ್ರಿ ಅನ್ನದಾತ ಸಂರಕ್ಷಣಾ ಅಭಿಯಾನ ಯೋಜನೆಯಡಿ ನೀಡಲಾಗುವ ಬೆಂಬಲ ಬೆಲೆ ಕಡಿತಗೊಳಿಸುತ್ತಾ ಬಂದಿದೆ ಎಂದು ಹೆಚ್ಡಿ ದೇವೇಗೌಡರು ರಾಜ್ಯಸಭೆ ಕಲಾಪದ ವೇಳೆ ಹೇಳಿದ್ದಾರೆ.