ಅಸ್ಸೋಂನಲ್ಲಿ ರಣಭೀಕರ ಮಳೆ: ಸಂಕಷ್ಟದಲ್ಲಿ 16 ಲಕ್ಷ ಜನತೆ - Flood
🎬 Watch Now: Feature Video
ಗುವಾಹಟಿ: ಅಸ್ಸೋಂನಲ್ಲಿ ರಣಭೀಕರ ಪ್ರವಾಹ ಉಂಟಾಗಿದ್ದು, 22 ಜಿಲ್ಲೆಗಳಲ್ಲಿ ಸುಮಾರು 16 ಲಕ್ಷ ಜನ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇನ್ನು ಮತಿಯಾ ಜಿಲ್ಲೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಈಗಾಗಲೇ 12,597 ಮಂದಿ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಆದರೆ, ಈ ಬಗ್ಗೆ ಇಲ್ಲಿನ ಸ್ಥಳೀಯರು ಮಾತನಾಡಿದ್ದು, ಸರ್ಕಾರದ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಸರ್ಕಾರ ನಮಗೆ ಸಹಾಯ ಮಾಡಬೇಕು. ನಮ್ಮ ಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಇನ್ನು ದೆಮಾಜಿ, ಲಖೀಂಪುರ್, ದರ್ರಾಂಗ್, ನಲ್ಬರಿ, ಬರ್ಪೇಟಾ ಸೇರಿ ಅನೇಕ ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ಹವಾಮಾನ ಇಲಾಖೆಯೂ ಸಹ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿವೆ.