ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೊದಲ ಕೊರೊನಾ ಸೋಂಕಿತ ಮಹಿಳೆ... ದೇಶದ ಜನರಿಗೆ ಹೇಳಿದ್ದೇನು ಕೇಳಿ! - ಗುಜರಾತ್ನ ಅಹಮದಾಬಾದ್
🎬 Watch Now: Feature Video
ಅಹಮದಾಬಾದ್: ಕೋವಿಡ್-19 ವೈರಸ್ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗುಜರಾತ್ನ ಅಹಮದಾಬಾದ್ನ 34 ವರ್ಷದ ಮಹಿಳೆ ಚಿಕಿತ್ಸೆ ಪಡೆದುಕೊಂಡು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಈ ಮಹಿಳೆ ದೇಶದ ಜನರಿಗೆ ಕೆಲವೊಂದು ಮಹತ್ವದ ಮಾಹಿತಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದಿರುವ ಅವರು, ಸರ್ಕಾರ ಜಾರಿಗೊಳಿಸಿರುವ ಸೂಚನೆ ತಪ್ಪದೇ ಪಾಲಿಸುವುದರ ಜತೆಗೆ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಗುಜರಾತ್ ರಾಜ್ಯದಲ್ಲಿ ಈ ಮಹಿಳೆಗೆ ಮೊದಲ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು.