ಗಾಯಗೊಂಡ ನಾಗಪ್ಪನಿಗೆ ಪ್ರಥಮ ಚಿಕಿತ್ಸೆ.. - ಉರಗ ರಕ್ಷಕ
🎬 Watch Now: Feature Video
ವಿಶಾಖಪಟ್ಟಣಂ (ಆಂಧ್ರಪ್ರದೇಶ): ಇಲ್ಲಿನ ಪಡೇರು ಪ್ರದೇಶದಲ್ಲಿ ಮನೆ ನಿರ್ಮಾಣ ಕಾಮಗಾರಿ ವೇಳೆ ಸಲಕರಣೆ ತಗುಲಿ ನಾಗರಹಾವೊಂದು ಗಾಯಗೊಂಡಿತ್ತು. ತಕ್ಷಣವೇ ಮನೆ ಮಾಲೀಕ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದ ಮೂಲಕ ಹಾವನ್ನು ಸ್ಥಳೀಯ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿಯಿರದ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹಾವಿಗೆ ಬ್ಯಾಂಡೇಜ್ ಕಟ್ಟಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.