ಚಿದಂಬರಂ ಬಂಧನ ಸುದ್ದಿ ಮುಚ್ಚಿಹಾಕಲು ಈ ಪ್ರೆಸ್ಮೀಟ್: ಪತ್ರಕರ್ತನ ಪ್ರಶ್ನೆಗೆ ವಿತ್ತ ಸಚಿವೆ ನೀಡಿದ್ರು ಈ ಉತ್ತರ! - ಆರ್ಥಿಕತೆ ಕುಸಿತ
🎬 Watch Now: Feature Video
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ದೇಶದ ಆರ್ಥಿಕತೆ ಬಲವರ್ಧನೆಗಾಗಿ ಬರೋಬ್ಬರಿ 32 ಅಂಶಗಳನ್ನು ಮಾಧ್ಯಮದವರೊಂದಿಗೆ ವಿತ್ತ ಸಚಿವೆ ಹಂಚಿಕೊಂಡರು. ಇದೇ ವೇಳೆ ನಿರ್ಮಾಲಾ ಸೀತಾರಾಮನ್ ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಬೇಕಾಯ್ತು. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಪತ್ರಕರ್ತರೋರ್ವರು, ದೇಶದಲ್ಲಿ ಉದ್ಭವವಾಗಿರುವ ಆರ್ಥಿಕತೆ ಕುಸಿತ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಅರೆಸ್ಟ್ ಮಾಡಿರುವ ಸುದ್ದಿ ಮುಚ್ಚಿಹಾಕುವ ಉದ್ದೇಶದಿಂದ ಈ ಸುದ್ದಿಗೋಷ್ಠಿ ನಡೆಸಲಾಗ್ತಿದೆ ಎಂದು ವಿಪಕ್ಷ ಹೇಳುತ್ತಿವೆ. ಇದಕ್ಕೆ ನಿಮ್ಮ ಉತ್ತರ ಏನು ಎಂದು ಕೇಳಿದಾಗ, ನಿರ್ಮಲಾ ಸೀತಾರಾಮನ್ ನಗುಮುಖದಿಂದಲೇ, ಭ್ರಷ್ಟಾಚಾರ ಹಾಗೂ ಆರ್ಥಿಕತೆ ಯಾವ ಅಧಿಕಾರಾವಧಿಯಲ್ಲಿ ಕುಸಿತ ಕಂಡಿದೆ ಎಂಬುದು ಎಲ್ಲರಿಗೂ ಗೊತ್ತು. ಚಿದಂಬರಂ ಬಂಧನಕ್ಕೂ ನನ್ನ ಸುದ್ದಿಗೋಷ್ಠಿಗೂ ಯಾವುದೇ ಸಂಬಂಧವಿಲ್ಲ ಎಂದು ಖಡಕ್ಕಾಗೇ ಆನ್ಸರ್ ಕೊಟ್ಟು ಗಮನ ಸೆಳೆದರು.