ಪಶ್ಚಿಮ ಬಂಗಾಳ ಫೈಟ್: ಬಿಜೆಪಿ ಸೇರಿದ ಫೇಮಸ್ ನಟಿ ಶ್ರಬಂತಿ ಚಟರ್ಜಿ! - ಬಂಗಾಳಿ ನಟಿ ಬಿಜೆಪಿ ಸೇರ್ಪಡೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10828925-thumbnail-3x2-wdfdfd.jpg)
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅನೇಕರು ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ವಿವಿಧ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಅಲ್ಲಿನ ಫೇಮಸ್ ನಟಿ ಶ್ರಬಂತಿ ಚಟರ್ಜಿ ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸೆಕ್ರೆಟರಿ ಕೈಲಾಶ್ ವಿಜಯವರ್ಗೀಯಾ ನೇತೃತ್ವದಲ್ಲಿ ಅವರು ಕಮಲ ಮುಡಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಮನೋಜ್ ತಿವಾರಿ ಟಿಎಂಸಿ ಹಾಗೂ ಅಶೋಕ್ ದಿಂಡಾ ಬಿಜೆಪಿ ಸೇರಿಕೊಂಡಿದ್ದರು.