ದಂಡಾಲಯ್ಯ.. ನಿವೃತ್ತ ನ್ಯಾಯಮೂರ್ತಿಗಳಿಗೆ ಮೊಣಕಾಲೂರಿ ವಿದಾಯ ಹೇಳಿದ ಜನ - Farmers given heartfull farewell
🎬 Watch Now: Feature Video
ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ರಾಕೇಶ್ ಕುಮಾರ್ ಇಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಹಾಗಾಗಿ ಅವರಿಗೆ ಇಲ್ಲಿನ ರೈತರು ಹಾಗೂ ಸಾರ್ವಜನಿಕರು ಅಭೂತಪೂರ್ವ ವಿದಾಯ ಹೇಳಿದ್ದಾರೆ. ಅಮರಾವತಿಯ ರಸ್ತೆಗಳಲ್ಲಿ ದಾರಿಯುದ್ದಕ್ಕೂ ಮಹಿಳೆಯರು, ರೈತರು ನಿಂತು ನ್ಯಾಯಮೂರ್ತಿ ವಾಹನದ ಮೂಲಕ ಹೋಗುವಾಗ, ಗೌರವ ಸಲ್ಲಿಸಿದರು. ಮೊಣಕಾಲೂರಿ, ಕೈಮುಗಿದು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಅವರಿಗೆ ನಮನ ಸಲ್ಲಿಸಿದರು. ಬಿಹಾರ ಮೂಲದ ನ್ಯಾಯಮೂರ್ತಿ ರಾಕೇಶ್ ಕುಮಾರ್ ಎಪಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ 18 ತಿಂಗಳು ಸೇವೆ ಸಲ್ಲಿಸಿದ್ದರು. ಸಾಂವಿಧಾನಿಕ ಹಕ್ಕುಗಳನ್ನು ಉಳಿಸುವ ಹಲವಾರು ತೀರ್ಪುಗಳನ್ನು ನೀಡಿದ್ದಾರೆ. ಅಲ್ಲದೇ ಆಡಳಿತದ ವಿರುದ್ಧ ಹಲವಾರು ವಿಮರ್ಶಾತ್ಮಕ ಅವಲೋಕನಗಳನ್ನು ಮಾಡಿದ್ದಾರೆ. ಹಾಗಾಗಿ ಜನರು ಈ ರೀತಿಯಾಗಿ ಭಾವನಾತ್ಮಕ ವಿದಾಯ ಹೇಳಿದ್ದಾರೆ.