ವಿಶಾಖಪಟ್ಟಣಂ ಬಳಿಯ ಔಷಧೀಯ ಘಟಕದಲ್ಲಿ ಸ್ಫೋಟ: ವಿಡಿಯೋ - ಕಾರ್ಮಿಕ ಸಾವು
🎬 Watch Now: Feature Video

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಇಲ್ಲಿನ ಔಷಧೀಯ ಘಟಕವೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಒಬ್ಬ ಕಾರ್ಮಿಕ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಾರ್ಮಾ ಸಿಟಿಯಲ್ಲಿ ಮೊದಲು ಸ್ಫೋಟ ಸಂಭವಿಸಿದ್ದು, ಅದರ ಬಳಿಕ ಭಾರಿ ಬೆಂಕಿ ಕಾಣಿಸಿಕೊಂಡಿದೆ. ರಾಮ್ಕಿ ದ್ರಾವಕಗಳ ಘಟಕವಾದ ಕರಾವಳಿ ತ್ಯಾಜ್ಯ ನಿರ್ವಹಣಾ ಯೋಜನೆಯಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭಾರಿ ಪ್ರಮಾಣದ ಬೆಂಕಿ ನಂದಿಸಲು ಹಾಗೂ ಸುತ್ತಮುತ್ತಲಿನ ಇತರ ಫಾರ್ಮಾ ಘಟಕಗಳಿಗೆ ಬೆಂಕಿ ಹರಡದಂತೆ ತಡೆಯಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ಕಾರ್ಮಿಕ ಮೃತಪಟ್ಟಿದ್ದ, ಇನ್ನೊಬ್ಬ ಕಾರ್ಮಿಕನಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಚಿಕಿತ್ಸೆಗಾಗಿ ನಗರದ ಗಜುವಾಕಾದ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ. ಶೇಕಡಾ 90ರಷ್ಟು ಬೆಂಕಿ ನಂದಿಸಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ.