Viral Video -'ವಾಹ್ ರೇ ಬಾಬಾ ವಾಹ್'.. ಧೋತಿಯಲ್ಲಿ ಯುವಕರಿಗೇ ಸೆಡ್ಡು ಹೊಡೆಯುವಂತೆ ಕ್ರಿಕೆಟ್ ಆಡುವ ತಾತ.. - ಧೋತಿ ಧರಿಸಿ ಕ್ರಿಕೆಟ್ ಆಡುತ್ತಿರುವ ತಾತ
🎬 Watch Now: Feature Video
ವೃದ್ಧನೊಬ್ಬರು ಧೋತಿ ಧರಿಸಿ ಸಿಕ್ಕಾಪಟ್ಟೆ ಹುಮ್ಮಸ್ಸಿನಿಂದ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಯುವಕರಿಗೇ ಸಡ್ಡು ಹೊಡೆಯುವಂತೆ ತಾತ ಬ್ಯಾಟ್ ಬೀಸಿ ರನ್‌ಗಳಿಗಾಗಿ ಓಡುತ್ತಿದ್ದು, ಇದನ್ನು ಕಂಡವರು ಫಿದಾ ಆಗಿದ್ದಾರೆ. 'ವಾಹ್ ರೇ ಬಾಬಾ ವಾಹ್' ಎಂದು ತಾತನಿಗೆ ಅಲ್ಲಿದ್ದವರು ಹರ್ಷೋದ್ಗಾರ ಮಾಡುತ್ತಿರುವುದು ಈ ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.