ಕುಡಿದ ಮತ್ತಿನಲ್ಲೇ ಜನರ ಬಳಿ ವಾಗ್ವಾದ... ಮತ ಹಾಕುವಂತೆ ಅಂಗಲಾಚಿದ ಈ ಅಭ್ಯರ್ಥಿ ಪಡಿಪಾಟಲು ನೋಡಿ! - ವೈಎಸ್ಆರ್ ಅಭ್ಯರ್ಥಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2868027-616-f624b7a4-a9b3-4007-aad5-31969273fff0.jpg)
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗೂಡೂರಿನಲ್ಲಿ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಎಂಪಿ ವರಪ್ರಸಾದ್ ಕುಡಿದ ಮತ್ತಿನಲ್ಲಿ ಜನರ ಬಳಿ ವಾಗ್ವಾದಕ್ಕಿಳಿದಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಬೆಳ್ಳಂಬೆಳಗ್ಗೆ ಕುಡಿದ ಮತ್ತಿನಲ್ಲೇ ವೋಟ್ ಕೇಳಲು ಜನರ ಬಳಿ ತೆರಳಿದ್ದರು ಈ ಮಾಜಿ ಎಂಪಿ. ಈ ವೇಳೆ ಜನರು ನಿಮ್ಮಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಮತದಾರರು ಹೀಗೆ ಹೇಳುತ್ತಿದ್ದಂತೆ ವೈಎಸ್ಆರ್ ಅಭ್ಯರ್ಥಿ ಫುಲ್ ಗರಂ ಆಗಿ ಜನರ ಮೇಲೆ ರೇಗಿದರು. ಅಭಿವೃದ್ಧಿಗಾಗಿ ನಾನು ಕೋಟಿ-ಕೋಟಿ
ಹಣ ಖರ್ಚು ಮಾಡಿದ್ದೇನೆ ಅಂತಾ ಅವಲತ್ತುಕೊಂಡಿದ್ದಾರೆ. ಈ ಬಾರಿಯಾದರೂ ನನಗೆ ವೋಟು ಹಾಕಿ ಎಂದು ಕುಡಿದು ಮತ್ತಿನಲ್ಲೇ ಜನರ ಕೈ ಹಿಡಿದು ಬೇಡಿಕೊಂಡಿದ್ದಾರೆ. ಈ ಎಲ್ಲಾ
ರಂಪಾಟ ರಸ್ತೆಯಲ್ಲೇ ನಡೆದಿದ್ದು, ಈ ದೃಶ್ಯಗಳೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿದೆ.