ತಾಯ್ತನದ ಮುಂದೆ ವೈರತ್ವವೂ ಗೌಣ... ಮರಿ ಬೆಕ್ಕಿಗೆ ಹಾಲುಣಿಸಿತು ಶ್ವಾನ! ವಿಡಿಯೋ... - ಬಾಲಸೋರ್ ಶ್ವಾನ ಸುದ್ದಿ
🎬 Watch Now: Feature Video
ಮಕ್ಕಳ ಹಸಿವನ್ನ ತಾಯಿ ಮಾತ್ರವೇ ನೀಗಿಸಬಲ್ಲಳು ಎಂಬುದಕ್ಕೆ ಈ ಶ್ವಾನವೇ ಸಾಕ್ಷಿಯಾಗಿದೆ. ಶ್ವಾನವೊಂದು ಆ ಮರಿಗೆ ಹಸಿವು ತೀರಿಸಿದೆ. ಅಂದ ಹಾಗೇ, ಈ ಶ್ವಾನ ತನ್ನ ಮರಿಗೆ ಹಾಲುಣಿಸಿಲ್ಲ. ಬದಲಾಗಿ, ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕ ಗಮನ ಸೆಳೆದಿದೆ. ಒಡಿಶಾದ ಬಾಲಸೋರ್ನಲ್ಲಿ ಹಸಿದ ಬೆಕ್ಕಿನ ಮರಿಗೆ ಶ್ವಾನವೊಂದು ಹಾಲುಣಿಸಿ ತಾಯ್ತನ ಮೆರೆದಿದೆ. ಬೆಕ್ಕು ಮತ್ತು ಶ್ವಾನ ಆಜನ್ಮ ಶತ್ರುಗಳಂತೆ ಕಂಡರೂ ಈ ರೀತಿ ತಾಯಿ ಪ್ರೇಮ ಕುತೂಹಲ ಮೂಡಿಸಿದೆ.