ಪೊಲೀಸರ ಮೇಲೆ ತಲ್ವಾರ್ ಬೀಸಿದ ಪ್ರತಿಭಟನಾಕಾರ... ಪ್ರತ್ಯುತ್ತರ ನೀಡಿದ ಖಾಕಿ ಪಡೆ! - ಗಣರಾಜ್ಯೋತ್ಸವ ದಿನ ಹಿಂಸಾಚಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10423105-thumbnail-3x2-wdfdfdfwdf.jpg)
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಿಂಘು ಗಡಿಯಲ್ಲಿ ಮುಂದುವರೆದಿದೆ. ಇದರ ಮಧ್ಯೆ ಪ್ರತಿಭಟನಾಕಾರರನ್ನ ಪೊಲೀಸರು ಚದುರಿಸಲು ಮುಂದಾಗಿದ್ದ ವೇಳೆ ವ್ಯಕ್ತಿಯೋರ್ವ ಪೊಲೀಸ್ ಕಾನ್ಸ್ಟೇಬಲ್ ಮೇಲೆ ತಲ್ವಾರ್ ಬೀಸಿರುವ ಘಟನೆ ನಡೆದಿದೆ. ಇದಕ್ಕೆ ಸರಿಯಾಗಿ ಉತ್ತರ ನೀಡಿರುವ ಖಾಕಿ ಪಡೆ, ಆತನಿಗೆ ಸರಿಯಾಗಿ ಥಳಿಸಿದೆ. ಪ್ರತಿಭಟನಾಕಾರ ತಲ್ವಾರ್ ಬೀಸಿರುವ ಪರಿಣಾಮ ಅಲಿಪುರ್ ಎಸ್ಎಚ್ಒ ಪ್ರದೀಪ್ ಪಲಿವಾಲ್ ಗಾಯಗೊಂಡಿದ್ದಾರೆ. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರದಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.