ದೆಹಲಿ ಅಗ್ನಿ ದುರಂತ: ಸಾವಿಗೂ ಮುನ್ನ ಸಹೋದರನೊಂದಿಗೆ ಯುವಕನ ಮನಕಲಕುವ ಮಾತುಗಳು- ಆಡಿಯೋ - ರಾಣಿ ಝಾನ್ಸಿ ರಸ್ತೆಯ ಅನಜ್ ಮಂಡಿ
🎬 Watch Now: Feature Video
ರಾಷ್ಟ್ರ ರಾಜಧಾನಿ ನವದೆಹಲಿಯ ರಾಣಿ ಝಾನ್ಸಿ ರಸ್ತೆಯ ಅನಜ್ ಮಂಡಿಯಲ್ಲಿರುವ ಕಾರ್ಖಾನೆಗೆ ಬೆಂಕಿ ಬಿದ್ದು ಭಾರಿ ಅನಾಹುತ ಸಂಭವಿಸಿತ್ತು. ಬೆಂಕಿ ಅವಘಡ ನಡೆದ ವೇಳೆ ಯುವಕನೋರ್ವ ತನ್ನ ಕುಟುಂಬದೊಂದಿಗೆ ಮಾತನಾಡಿದ್ದಾನೆ. 'ಅಣ್ಣ ಇವತ್ತು ನನ್ನ ಕಥೆ ಮುಗಿತು. ಕುಟುಂಬವನ್ನು ಚೆನ್ನಾಗಿ ನೋಡಿಕೊ...' ಎಂದು ತನ್ನ ಹಿರಿಯ ಸಹೋದರನೊಂದಿಗೆ ಮಾತನಾಡಿದ್ದಾನೆ. ಹಿರಿಯ ಸಹೋದರ ಮನು ಎಂಬಾತ ತನ್ನ ಕಿರಿಯ ಸಹೋದರನಿಗೆ ಧೈರ್ಯ ತುಂಬಿದ್ದರು. ಅಣ್ಣ-ತಮ್ಮನ ನಡುವೆ ನಡೆದ ಮನಕಲಕುವ ಸಂದೇಶ ಈಗ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಆ ಯುವಕ ಮಾತನಾಡುತ್ತಿರುವಾಗ ಜನರ ಸಾವು-ನೋವಿನ ಆಕ್ರಂದನ ಫೋನ್ನಲ್ಲಿ ಕೇಳಿಸುತ್ತದೆ. ಇನ್ನು ಈ ಅಗ್ನಿ ದುರಂತದಲ್ಲಿ 43 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.