ವಿಶೇಷ ಚೇತನ ಯುವಕನ ಪ್ರತಿಭೆಗೆ ಸೆಲ್ಯೂಟ್ ಹೊಡೆದ ದೆಹಲಿ ಸಿಎಂ ಕೇಜ್ರಿವಾಲ್! - ಮಗುವಿನ ಪ್ರತಿಭೆಗೆ ಸೆಲ್ಯೂಟ್ ಹೊಡೆದ ದೆಹಲಿ ಸಿಎಂ ಕೇಜ್ರಿವಾಲ್
🎬 Watch Now: Feature Video
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದ ವಿಡಿಯೋ ನೋಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ಚೇತನ ಯುವಕನ ಪ್ರತಿಭೆಗೆ ಸೆಲ್ಯೂಟ್ ಹೊಡೆದಿದ್ದಾರೆ. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ತರಲು ಶ್ರಮಿಸುತ್ತಿರುವ ಯುವಕನಿಗೆ ಒಂದು ಕಾಲು ಇಲ್ಲದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ನಿಖಿಲ್ ಎಂಬ ಯುವಕ ಒಂದೇ ಕಾಲಿನಲ್ಲಿ ವಿವಿಧ ಭಂಗಿಯ ಜಂಪ್ ಮಾಡ್ತಿರುವುದು ಇದರಲ್ಲಿ ಕಂಡಿದ್ದು, ಅದಕ್ಕೆ ಕೇಜ್ರಿವಾಲ್ ಫುಲ್ ಫಿದಾ ಆಗಿದ್ದಾರೆ. ಕಷ್ಟಪಟ್ಟು ದುಡಿಯುವವರು ಖಂಡಿತವಾಗಿ ಪ್ರತಿಫಲ ಪಡೆದುಕೊಳ್ಳುತ್ತಾರೆ. ನಿಖಿಲ್ ಖಂಡಿತವಾಗಿ ದೇಶದ ಹೆಸರು ಬೆಳಗಿಸುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ.
Last Updated : Apr 12, 2021, 3:29 PM IST