ಗಣರಾಜ್ಯೋತ್ಸವದ ಸಮಾರೋಪ ಸಮಾರಂಭ.. ಆಕರ್ಷಕ ಪಥಸಂಚಲನ.. - ದೆಹಲಿಯ ವಿಜಯ್ಚೌಕ್
🎬 Watch Now: Feature Video
ನವದೆಹಲಿ: 72ನೇ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭ ದೆಹಲಿಯ ವಿಜಯ್ಚೌಕ್ನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ವಿವಿಧ ಗಣ್ಯರು ಭಾಗಿಯಾಗಿದ್ದರು. ರಾಷ್ಟ್ರಪತಿ ಭವನ, ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಹಾಗೂ ಪಾರ್ಲಿಮೆಂಟ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಭಾರತೀಯ ನೌಕಾಪಡೆ, ವಾಯುಪಡೆ ತಂಡಗಳ ಆಕರ್ಷಕ ಪಥ ಸಂಚಲನ ಎಲ್ಲರ ಕಣ್ಮನ ಸೆಳೆಯಿತು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ದೆಹಲಿ ಪೊಲೀಸರ ಬ್ಯಾಂಡ್ಗಳನ್ನು ಬಾರಿಸಿ ಪರೇಡ್ ನಡೆಸಿದರು. ಕೋವಿಡ್ ಮಾರ್ಗಸೂಚಿ ಅನುಸರಿಸಿ ಸಮಾರಂಭ ನಡೆಸಲಾಯಿತು.
Last Updated : Jan 29, 2021, 7:33 PM IST