ಬಿಜೆಪಿ-ಜೆಡಿಯು ತಿರಸ್ಕರಿಸಬೇಡಿ, ಇದು ಕ್ರಿಕೆಟ್ನಲ್ಲಿ ಸಚಿನ್-ಸೆಹ್ವಾಗ್ ಜೋಡಿಯಂತೆ: ರಾಜನಾಥ್ - ಬಿಹಾರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್
🎬 Watch Now: Feature Video
ಭೋಜ್ಪುರ್(ಬಿಹಾರ): ಬಿಹಾರ ವಿಧಾನಸಭಾ ಪ್ರಚಾರದ ಕಾವು ರಂಗೇರಿದೆ. ದಿನದಿಂದ ದಿನಕ್ಕೆ ವಿವಿಧ ಪಕ್ಷಗಳ ನಾಯಕರು ಕಣಕ್ಕಿಳಿದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯದ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಭೋಜ್ಪುರ್ ಜಿಲ್ಲೆಯ ಬರ್ಹರಾದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ-ಜೆಡಿಯು ಜೋಡಿಯನ್ನು ತಿರಸ್ಕರಿಸಬೇಡಿ. ಈ ಜೋಡಿ ಕ್ರಿಕೆಟ್ನಲ್ಲಿ ಸಚಿನ್-ಸೆಹ್ವಾಗ್ ಅವರ ಆರಂಭಿಕ ಜೋಡಿಯಂತೆ ಎಂದು ಬಣ್ಣಿಸಿದ್ದಾರೆ.