20ನೇ ಕಾರ್ಗಿಲ್ ವಿಜಯ್ ದಿವಸ್ ಮರುದಿನವೇ ಇಬ್ಬರು ಉಗ್ರರ ಹತ್ಯೆ - ಉಗ್ರರ ಹತ್ಯೆ
🎬 Watch Now: Feature Video
ಭಾರತದ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿಯಾದ ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ನಿನೆಗೆ 20 ವರ್ಷವಾಯಿತು. ಈ ಸಂದರ್ಭದಲ್ಲಿ ದೇಶಾದ್ಯಂತ ಹುತಾತ್ಮ ಯೋಧರು ಮತ್ತು ಕಾರ್ಗಿಲ್ ವೀರಾಗ್ರಣಿಗಳಿಗೆ ಗೌರವ ಸಮರ್ಪಿಸಲಾಯಿತು. ವಿಜಯೋತ್ಸವ ಆಚರಣೆ 24 ಗಂಟೆಯ ಕಳೆಯುವ ಮೊದಲೇ ಕಣಿವೆ ರಾಜ್ಯದಲ್ಲಿ ಉಗ್ರರ ಗುಂಡಿನ ಧ್ವನಿ ಕೇಳಿ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಸಂಭವಿಸಿದ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಣಿವೆ ಇನ್ನೊಂದು ಭಾಗದಲ್ಲಿ ನಡೆದ ಉಗ್ರರ ದಾಳಿಗೆ ಓರ್ವ ಯೋಧ ಮೃತಪಟಿದ್ದಾರೆ.