ಬೆಂಗಳೂರಿಗೆ ಆಗಮಿಸಿದ ಡಿಕೆಶಿ: ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಿದ ಅಭಿಮಾನಿಗಳು: VIDEO - D K Shivakumar news update
🎬 Watch Now: Feature Video
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿ ಕೆ ಶಿವಕುಮಾರ್ಗೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು. ಅಕ್ರಮ ಹಣ ವರ್ಗಾವಣೆ ಆರೋಪದಡಿ ಜೈಲು ಸೇರಿದ್ದ ಡಿಕೆಶಿ, ದೆಹಲಿ ಹೈಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿದರು. ಸ್ಪೈಸ್ ಜೆಟ್ SG8717 ನಲ್ಲಿ ಕೆಇಎಎಲ್ಗೆ ಆಗಮಿಸಿದ ಅವರಿಗೆ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ತಮ್ಮ ಹೆಗಲ ಮೇಲೆ ಎತ್ತಿಕೊಂಡು ಕಾರಿನ ಬಳಿಗೆ ಬಂದು ಕಾರ್ಯಕರ್ತರೇ ಕಾರು ಹತ್ತಿಸಿದ್ರು. ಕಾರಿನ ಬಳಿ ಬರುವವರೆಗೂ ಕಾರ್ಯಕರ್ತರು ಹೂವುಗಳನ್ನ ಅವರ ಮೇಲೆ ಎಸೆಯುತ್ತಿದ್ದರು. ಬಳಿಕ ಸಾದಹಳ್ಳಿ ಗೇಟ್ಗೆ ಡಿಕೆಶಿ ಪ್ರಯಾಣ ಬೆಳೆಸಿದರು.
Last Updated : Oct 26, 2019, 4:37 PM IST