'ರಕ್ಷಿತಾ'- ಬೈಕ್ ಆ್ಯಂಬುಲೆನ್ಸ್ಗೆ ಚಾಲನೆ; ಭದ್ರತಾ ಸಿಬ್ಬಂದಿಗೆ ಸಹಾಯ ಹಸ್ತ - bike ambulance
🎬 Watch Now: Feature Video
ನವದೆಹಲಿ: ಸಿಆರ್‌ಪಿಎಫ್ ಮತ್ತು ಡಿಆರ್‌ಡಿಒ ಸೋಮವಾರದಂದು ವಿಶೇಷವಾಗಿ ಅಭಿವೃದ್ಧಿಪಡಿಸಿದ 'ರಕ್ಷಿತಾ' - ಬೈಕ್ ಆಂಬ್ಯುಲೆನ್ಸ್ ಗೆ ಚಾಲನೆ ನೀಡಿದೆ. ಭದ್ರತಾ ಸಿಬ್ಬಂದಿಗೆ ತೊಂದರೆಯಾದಲ್ಲಿ, ತುರ್ತು ಸಂದರ್ಭ ಒದಗಿಬಂದಲ್ಲಿ ಈ ಬೈಕ್ ಆ್ಯಂಬುಲೆನ್ಸ್ಗಳು ಸಹಾಯ ನೀಡಲಿವೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕ ಎಪಿ ಮಹೇಶ್ವರಿ ಎಎನ್‌ಐಯೊಂದಿಗೆ ಮಾತನಾಡಿ, ಈ ಬೈಕ್ಗಳು ಬಿಜಾಪುರ, ಸುಕ್ಮಾ, ದಂತೇವಾಡ ಮುಂತಾದ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತವಾಗಲಿವೆ. ಆ ಅರಣ್ಯ ಪ್ರದೇಶಗಳಲ್ಲಿ ದೊಡ್ಡ ವಾಹನಗಳು ಅಥವಾ ಆ್ಯಂಬುಲೆನ್ಸ್ಗಳನ್ನು ಕೊಂಡೊಯ್ಯುವುದು ಒಂದು ಸವಾಲಾಗಿರುವುದರಿಂದ, ಈ ಬೈಕ್ಗಳು ಅಂತಹ ಸ್ಥಳಗಳಲ್ಲಿ ಹೆಚ್ಚು ಸಹಕಾರ ನೀಡಲಿವೆ ಎಂದರು. ಇಂತಹ ಬೈಕುಗಳು ನಕ್ಸಲೈಟ್ ವಲಯಗಳಲ್ಲಿ, ಕಿರಿದಾದ ರಸ್ತೆಗಳಲ್ಲಿ ವೇಗವಾಗಿ ತಲುಪುದನ್ನು ಸಿಆರ್‌ಪಿಎಫ್ ಗಮನಿಸಿದ ನಂತರ ಬೈಕನ್ನು ಅಭಿವೃದ್ಧಿಪಡಿಸಲಾಗಿದೆಯೆಂದರು.