ಕರುವಿಗಾಗಿ ಬೈಕ್ ಹಿಂದೆ 5 ಕಿ.ಮೀ ಓಡಿದ ಕಾಮಧೇನು.. - Telangana's Sangareddy district
🎬 Watch Now: Feature Video
ಸಂಗರೆಡ್ಡಿ (ತೆಲಂಗಾಣ): ತಾಯಿಯ ಪ್ರೀತಿಗೆ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದಕ್ಕೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಇಲ್ಲೊಂದು ಹಸು ತನ್ನ ಕರುವಿಗಾಗಿ ಬರೋಬ್ಬರಿ ಐದು ಕಿಲೋ ಮೀಟರ್ನಷ್ಟು ದೂರ ಓಡಿರುವ ದೃಶ್ಯ ಕರುಳು ಹಿಂಡುವಂತಿದೆ. ಮೊಹಮ್ಮದ್ ಪಾಷಾ ಎಂಬ ರೈತ ಹಸುವಿನ ಕರುವನ್ನು ಮಾರಾಟ ಮಾಡಲು ನರಸಾಪುರ ಮಾರುಕಟ್ಟೆಗೆ ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಆದರೆ, ತನ್ನ ಕಣ್ಣಿಂದ ಕರುವು ಮರೆಯಾಗುತ್ತಿರುವುದನ್ನು ಸಹಿಸಲಾಗದ ಹಸುವು ಗಾಬರಿಯಿಂದ ಬೈಕ್ ಹಿಂದೆಯೇ ಐದು ಕಿ.ಮೀ ದೂರ ಓಡಿದೆ.