ಬೆಲ್ಗ್ರೇಡ್ನಲ್ಲೂ ಪಾಕ್ ಮಾನ ಹರಾಜು... ವಾಗ್ದಾಳಿ ನಡೆಸಿದ ಸಂಸದ ಶಶಿ ತರೂರ್! - ಕಾಂಗ್ರೆಸ್ ಸಂಸದ ಶಶಿ ತರೂರ್
🎬 Watch Now: Feature Video
ಬೆಲ್ಗ್ರೇಡ್ನಲ್ಲಿ ನಡೆದ 141ನೇ ಅಂತರ ಸಂಸದೀಯ ಒಕ್ಕೂಟದ 141ನೇ ಅಸೆಂಬ್ಲಿಯಲ್ಲೂ ಪಾಕ್ ಮಾನ ಹರಾಜುಗೊಂಡಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಒಕ್ಕೂಟದಲ್ಲಿ ಭಾಗಿಯಾಗಿದ್ದ ಇಂಡಿಯನ್ ಪಾರ್ಲಿಮೆಂಟರಿ ಸದಸ್ಯ, ಕಾಂಗ್ರೆಸ್ ಸಂಸದ ಶಶಿ ತರೂರ್ ನೆರೆಯ ರಾಷ್ಟ್ರದ ಮೇಲೆ ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಪದೇ ಪದೆ ಭಾರತದ ಮೇಲೆ ಆಂತರಿಕ ವಿಷಯವಿಟ್ಟುಕೊಂಡು ಜಗಳಕ್ಕೆ ಮುಂದಾಗುತ್ತಿದೆ. ಆದರೆ, ಭಾರತ ಸಂಪೂರ್ಣವಾಗಿ ಅಂತಹ ಉಲ್ಲೇಖ ತಿರಸ್ಕರಿಸಿ, ಬಲವಾಗಿ ಖಂಡಿಸುತ್ತದೆ. ಗಡಿ ಉದ್ದಕ್ಕೂ ಉಗ್ರವಾದ ಹಬ್ಬಿಸುತ್ತಿರುವ ಪಾಕ್, ಜಮ್ಮು-ಕಾಶ್ಮೀರದಲ್ಲಿನ ಶಾಂತಿ ಹದಗೆಡಸಲು ಮುಂದಾಗುತ್ತಿದೆ ಇದರ ಜತೆಗೆ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.