ಚಿಲಿಕಾ ಸರೋವರದಲ್ಲಿ ವಲಸೆ ಹಕ್ಕಿಗಳ ಜತೆ ಈಗ ಇರ್ರಾವಾಡಿ ಡಾಲ್ಫಿನ್ಗಳ ಕಲರವ - Irrawaddy Dolphins
🎬 Watch Now: Feature Video
ಒಡಿಶಾದ ಚಿಲಿಕಾ ಸರೋವರದಲ್ಲಿ ವಲಸೆ ಹಕ್ಕಿಗಳು ಮಾತ್ರವಲ್ಲದೇ, ಅಪರೂಪದ ಇರ್ರಾವಾಡಿ ಡಾಲ್ಫಿನ್ ಗಳಿರುವುದರಿಂದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಮೊದಲು ಚಿಲಿಕಾ ಸರೋವರಕ್ಕೆ ಪ್ರವಾಸಿಗರು ಹಕ್ಕಿಗಳನ್ನು ನೋಡಲು ಬರುತ್ತಿದ್ದರು. ಈಗ ಇರ್ರಾವಾಡಿ ಡಾಲ್ಫಿನ್ಗಳು ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಚಿಲಿಕಾ ಡೆವಲಪ್‌ಮೆಂಟ್ ಅಥಾರಿಟಿ (ಸಿಡಿಎ) ತಿಳಿಸಿದೆ. ಈ ಚಿಲಿಕಾ ಸರೋವರದಲ್ಲಿ 11.42 ಲಕ್ಷ ವಲಸೆ ಹಕ್ಕಿಗಳು, ಇನ್ನೂ 156 ಇರ್ರಾವಾಡಿ ಡಾಲ್ಫಿನ್ಗಳು ಎಂದು ಸಿಡಿಎ ತಿಳಿಸಿದೆ.