ಆರ್ಬಿಟರ್ ಉತ್ತಮವಾಗಿ ಕೆಲಸ ಮಾಡ್ತಿದ್ದು, ಲ್ಯಾಂಡರ್ ಸಿಗ್ನಲ್ ಬಗ್ಗೆ ಗೊತ್ತಿಲ್ಲ: ಕೆ ಸಿವನ್ - ಗಗನಯಾನ ಯೋಜನೆ
🎬 Watch Now: Feature Video

ಬೆಂಗಳೂರು: ಚಂದ್ರಯಾನ-2ದ ಆರ್ಬಿಟರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅದರಿಂದ ಎಲ್ಲ ರೀತಿಯ ಮಾಹಿತಿ ನಮಗೆ ಲಭ್ಯವಾಗುತ್ತಿದೆ. ಆದರೆ ನಿಜವಾಗಲೂ ಲ್ಯಾಂಡರ್ಗೆ ಏನು ಆಗಿದೆ ಎಂಬುದರ ಬಗ್ಗೆ ನಾವು ಅಧ್ಯಯನ ನಡೆಸುತ್ತಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ ಸಿವನ್ ಮಾಹಿತಿ ನೀಡಿದ್ರು. ಬರುವ ದಿನಗಳಲ್ಲಿ ಹೆಚ್ಚಿನ ಮಿಶನ್ ಲಾಂಚ್ ಮಾಡಲು ಪ್ಲಾನ್ ಹಾಕಿಕೊಂಡಿದ್ದು, ಎಲ್ಲವೂ ಯೋಜನೆಯಂತೆ ನಡೆಯಲಿವೆ ಎಂದು ತಿಳಿಸಿದರು. ಮಾನವ ಸಹಿತ ಗಗನಯಾನ ಯೋಜನೆ 2022ರ ಅಕ್ಟೋಬರ್ ಕೊನೆಯೊಳಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ರು.