ದೆಹಲಿ ಹಿಂಸಾಚಾರ: ಕೇಂದ್ರ ಕಣ್ಮುಚ್ಚಿದೆ ಎಂದು ಕೈ ಹಿರಿಯ ಮುಖಂಡ ಖುರ್ಷಿದ್ ವಾಗ್ದಾಳಿ.. ಚಿಟ್‌ಚಾಟ್ - ಸಿಎಎ ವಿರೋಧಿ ಪ್ರತಿಭಟನಾಕಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6208547-thumbnail-3x2-na.jpg)
ನವದೆಹಲಿ : ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯುತ್ತಿದೆ. ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ವಿರೋಧಿಸುವವರ ಕಾಳಜಿ ಮಾಡುವುದನ್ನು ಬಿಟ್ಟು ಕಣ್ಮುಚ್ಚಿ ಕುಳಿತಿದೆಯಾ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಆಲಂ ಖಾನ್ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಸಿಎಎ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಅಲ್ಲದೇ ಸರ್ಕಾರಕ್ಕೆ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಯಾವುದೇ ಕಾಳಜಿ ಇಲ್ಲ.
ದಿನೇದಿನೆ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಹಿರಿಯ ಪತ್ರಕರ್ತ ಅಮಿತ್ ಅಗ್ನಿಹೋತ್ರಿ ನಡೆಸಿರುವ ಸಂವಾದದಲ್ಲಿ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.