ಬಿಜೆಪಿ ಮುಖಂಡನ ಕೊಲೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ.. - ಪಶ್ಚಿಮ ಬಂಗಾಳ ಕ್ರೈಂ ಸುದ್ದಿ
🎬 Watch Now: Feature Video
ಭಾನುವಾರ ರಾತ್ರಿ ಪಶ್ಚಿಮ ಬಂಗಾಳದ ತಿತಾಗಡ್ನಲ್ಲಿ ಬಿಜೆಪಿ ಸಂಸದ ಅರುಣ್ ಸಿಂಗ್ರ ಆಪ್ತರಾಗಿದ್ದ ಮನೀಷ್ ಶುಕ್ಲಾ ಎಂಬುವರನ್ನು ಕೊಲೆಗೈಯ್ಯಲಾಗಿತ್ತು. ಸಿಸಿಟಿವಿ ಕೊಲೆ ಮಾಡಿದ ದೃಶ್ಯ ಸೆರೆಯಾಗಿದ್ದು, ಅದೀಗ ಪೊಲೀಸರಿಗೆ ಸಿಕ್ಕಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮನೀಷ್ ಶುಕ್ಲಾರ ಮೇಲೆ ಐದು ಸುತ್ತು ಗುಂಡು ಹಾರಿಸಿರುವುದು, ಶುಕ್ಲಾ ಅವರು ಕಾರಿನಿಂದ ಕೆಳಗೆ ಬೀಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಈ ಕೃತ್ಯ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.