thumbnail

By

Published : Dec 24, 2019, 8:01 AM IST

ETV Bharat / Videos

ವೇಗವಾಗಿ ಲೈಟ್​ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ! ವಿಡಿಯೋ...

ಕಾರೊಂದು ವೇಗವಾಗಿ ಲೈಟ್​ ಕಂಬಕ್ಕೆ ಡಿಕ್ಕಿ ಹೊಡೆದು ಆತಂಕ ಸೃಷ್ಟಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನ ಬಂಜಾರ್​ಹಿಲ್ಸ್​ನಲ್ಲಿ ನಡೆದಿದೆ. ಅಪಘಾತ ನಡೆದ ಸ್ಥಳದ ಕೊಂಚ ಮುಂದೆ ಟ್ರಾಫಿಕ್​ ಸಿಗ್ನಲ್​ ಹಾಕಿತ್ತು. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಲೈಟ್​ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್​ ಅಪಘಾತದಲ್ಲಿ ಯಾವುದೇ ಪ್ರಾಣಾಪಯವಾಗಿಲ್ಲ. ಕಾರಿನಲ್ಲಿ ಯುವಕರಿಬ್ಬರಿದ್ದು, ವ್ಯಾಪಾರಸ್ಥರ ಮಕ್ಕಳೆಂದು ತಿಳಿದು ಬಂದಿದೆ. ವಿದ್ಯುತ್​ ಅಧಿಕಾರಿಗಳ ದೂರಿನ ಮೆರೆಗೆ ಬಂಜಾರ್​ಹಿಲ್ಸ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.