ಹೈದರಾಬಾದ್​-ಬೆಂಗಳೂರು ಬಸ್​ ಪಲ್ಟಿ, 10 ಜನರಿಗೆ ಗಾಯ... ವಾಹನ​ ತೆರವು ವೇಳೆ ಕ್ರೇನೂ​ ಪಲ್ಟಿ​! - ರಂಗಾರೆಡ್ಡಿ ಬಸ್​ ಪಲ್ಟಿ ಸುದ್ದಿ

🎬 Watch Now: Feature Video

thumbnail

By

Published : Dec 3, 2019, 1:47 PM IST

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮದನಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಹೈದರಾಬಾದ್​ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಬ್ಬರು ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ನಡುರಸ್ತೆಯಲ್ಲೇ ಬಿದ್ದ ಬಸ್​ ತೆರವಿಗೆ ಬಂದ ಕ್ರೇನ್​ ಸಹ ಪಲ್ಟಿಯಾಗಿತ್ತು. ಬಳಿಕ ಮತ್ತೊಂದು ಕ್ರೇನ್​ ಸಹಾಯದಿಂದ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಇನ್ನು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಫುಲ್​ ಟ್ರಾಫಿಕ್​ ಜಾಮ್​ ಆಗಿದ್ದು, ಪೊಲೀಸರು ಸುಗಮ ಸಂಚಾರ ಅನುವು ಮಾಡಲು ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.