ಕನಿಗಿರಿಯಲ್ಲಿ ‘ಕಾವೇರಿ’ ಧಗಧಗ... ಪ್ರಯಾಣಿಕರನ್ನ ಕಾಪಾಡಿದ ಬಸ್ ಚಾಲಕ! - ಪ್ರಕಾಶಂ ಬಸ್ಗೆ ಬೆಂಕಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5188753-331-5188753-1574821351285.jpg)
ಖಾಸಗಿ ಬಸ್ವೊಂದು ಬೆಂಕಿಗೆ ಆಹುತಿಯಾಗಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ಪಾಮೂರಿನಿಂದ ಹೈದರಾಬಾದ್ಗೆ ಹೋಗುತ್ತಿದ್ದ ಕಾವೇರಿ ಬಸ್ ಪ್ರಕಾಶಂ ಜಿಲ್ಲೆಯ ಕನಿಗಿರಿಯ ಲಿಂಗಾರೆಡ್ಡಿಪಲ್ಲೆ ಬಳಿ ಬರುತ್ತಿದ್ದಂತೆ ಆಯಲ್ ಟ್ಯಾಂಕ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಬಸ್ ಚಾಲಕ ಕೂಡಲೇ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಇಳಿದ ಸ್ವಲ್ಪ ಹೊತ್ತಿನಲ್ಲಿ ಬೆಂಕಿ ಬಸ್ ತುಂಬ ಆವರಿಸಿಕೊಂಡಿತು. ನೋಡ - ನೋಡುತ್ತಿದ್ದಂತೆ ಎಲ್ಲರ ಎದುರೇ ಬಸ್ ಬೆಂಕಿಗಾಹುತಿ. ಡ್ರೈವರ್ನ ಸಮಯಪ್ರಜ್ಞೆ ಯಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದ್ರೆ ಪ್ರಯಾಣಿಕರ ಲಕ್ಷಾಂತರ ಮಾಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.